ಐ.ಎನ್.ಎಸ್ ಐರಾವತ್ ನೌಕೆಯು, ಭಾರತೀಯ ನೌಕಾಸೇನೆಯ ಯುದ್ಧ ಟ್ಯಾಂಕ್'ಗಳನ್ನು ಭೂಸ್ಪರ್ಶಿಸುವ ಶಾರ್ದೂಲ ವರ್ಗದ ಬೃಹತ್ ನೌಕೆಗಳ ಶ್ರೇಣಿಯಲ್ಲಿ, ತೃತೀಯ ನೌಕೆಯಾಗಿದೆ. ಸಕಲ ಆನೆಗಳ ರಾಜನಾದ ಐರಾವತವು ದೇವರಾಜ ಇಂದ್ರನ ವಾಹನವಾಗಿದೆ. ಭಾರತೀಯ ನೌಕಾಸೇನೆಯಿಂದ ಕಾರ್ಯಾರಂಭಕ್ಕೊಳಪಟ್ಟ ೧೩೨ನೇ ನೌಕೆಯಾಗಿರುವ ಇದು ಕಲ್ಕತ್ತಾದಲ್ಲಿನ ಗಾರ್ಡನ್ ರೀಚ್ ಶಿಪ್-ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ರವರಿಂದ ನಿರ್ಮಿತವಾಗಿದೆ.